ಬಣ್ಣದ ಗರಿಯಿದು-

ಇಂತಹ ಚಿತ್ರವನ್ನು ತೆಗೆಯುವ ಟೆಕ್ನಿಕ್ ಯಾರಿಂದಲೂ ಸಿಕ್ಕಿಲ್ಲ.ಜರ್ಮನ್ ನ್ಯೂಸ್ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರವೊಂದನ್ನನೋಡಿ,ಸತತ ಪ್ರಯತ್ನದಿಂದ ಕ್ಯಾಮೆರಾದಮೇಲೆ ಹಿಡಿತ ಸಾಧಿಸಿದ ಚಿತ್ರವಿದು.ನಂತರದ ದಿನಗಳಲ್ಲಿ ಏಕಲವ್ಯನ ಮಾರ್ಗ ಅನುಸರಿಸಿ ಛಾಯಾಗ್ರಹಣ ಕಲೆಯನ್ನು ಕರಗತ ಮಾಡಿಕೊಂಡೆ.
ಚಿಕ್ಕವನಿದ್ದಾಗ ಅಕ್ಕಂದಿರಜೊತೆ ಗದ್ದೆಯಲ್ಲಿ ಆಟ ಆಡುತ್ತಿದ್ದೆ.ಸಸಿ ಮಡಿಗಳಲ್ಲಿ ಅಕ್ಕನ ಕೈ ಹಿಡಿದುಕೊಂಡು ಓಡುತ್ತಿದ್ದೆ.ಆ ದಿನಗಳ ನೆನಪೇ ಈ ಚಿತ್ರಕ್ಕೆ ಪ್ರೇರಣೆ. ಕ್ಲಿಕ್ಕಿಸಿದ್ದೇನೋಸರಿ ಹೇಗೆ ಮೂಡಿದೆ ನೋಡುವದು ವಾರದ ನಂತರ.ಏಕಂದ್ರೆ ಆಗ ರೋಲ್ ಯುಗ.
ಇನ್ನೂ ದೂರಕೆ-

ಶಾಲೆಗೆ ರಜಾಇದ್ದಾಗ ಅಡವಯಿಂದ ಬಿದಿರು ಕಡಿದುತಂದು,ನಾವೆ ಪಿಚಕಾರಿ ಮಾಡಿಕೊಂಡು ನೀರಾಟ ಆಡಬೇಕಿತ್ತು.ಆದರೆ ಈಗ ಪೇಟೆಯಿಂದ ತಂದರಾಯಿತು ನೀರಾಟ ಆಡಿದರಾಯಿತು.
ಪಿಚಕಾರಿ ಸುಲಭದಲ್ಲಿ ಸಿಕ್ಕರೂ ಶಟರ್ ಕಡಿಮೆ ವೇಗದಲ್ಲಿಟ್ಟು ಫೋಟೋ ತೆಗೆಯುವದು ಸುಲಭವಲ್ಲ
ಕೈ ಕೈ ಹಿಡಿದು-

ಬೆಸಿಗೆರಜಾ ಪೂರ್ತಿ ಅಜ್ಜನಮನೆಯಲ್ಲಿಯೇ.ಮೊಮ್ಮಕ್ಕಳೆಲ್ಲಾ ಸೇರಿದರೆ ನದಿಯ ತಟದಲ್ಲಿಯೇ ಆಟ.ಇನ್ನೋಂದು ದಂಡೆಗೆ ಹೋಗುವದಾದರೆ ಅಥವಾ ನದಿಮಧ್ಯೆ ಇರುವ ದೊಡ್ಡ ಕಲ್ಲುಬಂಡೆಯಮೇಲೆ ಕೂಡ್ರುವದಾದರೆ ಹೀಗೇ ಕೈಕೈ ಹಿಡಿದು ದಾಟುತ್ತಿದ್ದೆವು.
ಸೈಕಲ್ ಸ್ನಾನ-

ಕೆಸರಾದ ಸೈಕಲ್ ಕಂಡರೆ ತೊಳೆದುಕೊಡುತ್ತೇವೆಂಬ ನೆಪಮಾಡಿ ಸೈಕಲ್ ಪಡೆದು,ತೃಪ್ತಿಯಾಗುವಸ್ಟು ಕೈಕಲ್ ಹೊಡೆಯುತ್ತಿದ್ದೆವು. ಆ ನಂತರ ನೀರಿನಲ್ಲಿ ಸೈಕಲ್ ನಿಲ್ಲಿಸಿ ಜೋರಗಿ ಪ್ಯಾಟಲ್ ತಿರುಗಿಸಿ, ಎತ್ತರಕ್ಕೆ ಚಿಮ್ಮಿದ ನೀರಿನಿಂದ ನಾವೂ ಸ್ನಾನ ಮಡುತ್ತಿದ್ದೆವು.ಮರೆಯಲಾರದ ನೆನಪು ಸ್ಥಿರಚಿತ್ರವಾಗಿ, ಹಲವು ರಾಜ್ಯ,ರಾಷ್ಟ್ರ,ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತಂದುಕೊಟ್ಟಿತು.
ವಿ.ಡಿ.ಭಟ್,
ಪ್ರತ್ಯುತ್ತರಅಳಿಸಿಎಲ್ಲ ಫೋಟೊಗಳು ತುಂಬಾ ಚೆನ್ನಾಗಿವೆ. ಹಿಂಬೆಳಕಿನ ಪ್ರಯೋಗ ತುಂಬಾ ಚೆನ್ನಾಗಿ ಮೂಡಿಬಂದಿದೆ.
chennaagive
ಪ್ರತ್ಯುತ್ತರಅಳಿಸಿvinayakanna ptos soooooooooooper.........
ಪ್ರತ್ಯುತ್ತರಅಳಿಸಿ" VD "....ITS MAGIC...!
ಪ್ರತ್ಯುತ್ತರಅಳಿಸಿPLZ KEEP GOING GOOD WORK.