Pages

ಶುಕ್ರವಾರ, ಆಗಸ್ಟ್ 6, 2010

ಆ ಕ್ಷಣಕ್ಕೆ ಕ್ಲಿಕ್

ಮೊದಲ ಮೆಟ್ಟಿಲು




ಒಂದುದಿನ ಮಧ್ಯಾಹ್ನ ಎಲ್ಲರೂ ಊಟಮಾಡಿ ಮಲಗಿರುವ ಸಮಯನೋಡಿ,ಪಕ್ಕದಮನೆಯ ಮಕ್ಕಳಿಬ್ಬರು ಒಣಗಿಸಿರುವ ಕೊಬ್ಬರೀ ತಿನ್ನುವ ಪ್ಲ್ಯಾನ್ ಹಾಕಿ ಅಟ್ಟ ಏರಲು ಮುಂದಾದರು.ನಾ ಮಾತ್ರ ಕ್ಯಾಮೆರಾ ಹಿಡಿದು ಇವರನ್ನೇ ಗಮನಿಸುತ್ತಿದ್ದೆ.ಮೊದಲು ಅಣ್ಣ ಮೇಲೇರಿದ,ತಿರುಗಿ ನೋಡಿದರೆ ತಂಗಿ ನಿಂತಲ್ಲಿಯೇ.ಅವಳಮುಖದಲ್ಲಿ ಭಯದಛಾಯೆ ತುಂಬಿತ್ತು.ಅಷ್ಟರಲ್ಲಿ ಅವಳಣ್ಣ ಸ್ವಲ್ಪ ಕೆಳಕ್ಕಿಳಿದ, ಕೈಹಿಡಿದು ನಿಧಾನವಾಗಿ ಮೇಲೆತ್ತಿದ.ಆ ಸಂದರ್ಭಕ್ಕೆ ಕ್ಲಿಕ್ ಶಬ್ಧ. ಅದೇ ಮೊದಲ ಮೆಟ್ಟಿಲಲ್ಲಿನಿಂತ ಈಚಿತ್ರ.


ಹಾಗಲ್ಲಾ, ಕೊಡಿಲ್ಲಿ



ಒಂದು ಒಳ್ಳೆಯ ಚಿತ್ರತೆಗೆಯಬೇಕೆಂದೇ ದೊದ್ಡೊಡ್ಡ ಬಲೂನ್ ತಂದ್ಕೊಟ್ಟೆ.ಮಕ್ಕಳಿಬ್ರೂ ತುಂಬಾ ಖುಷಿಯಿಂದ ಆಟಾ ಆಡಿದ್ರು.ನಾ ಒಳ್ಳೊಳ್ಳೆ ಫೋಟೊ ತೆಕ್ಕೊಂಡೆ.ಸ್ವಲ್ಪೇ ಹೊತ್ತಲ್ಲಿ ಬಲೂನ್ ಎರಡೂ ಢಂ.ಮಕ್ಕಳ ಮುಖ ಸಪ್ಪೆಯಾಯ್ತು.ಬಲೂನ್ ಪೀಸ್ ಪೀಸ್ ಆಯ್ತು.ಆದ್ರೆ ಬಿಟ್ಟಿಲ್ಲಾ. ಅಲ್ಲೇಬಿದ್ದ ಪೀಸ್ ತೆಕ್ಕೊಂಡು ಬೆರಳಿಗೆ ಸಿಕ್ಕಿಸಿ ಬಾಯಲ್ಲಿಟ್ಟು ಶ್ವಾಸ ಒಳಕ್ಕೆಳೆದ ಪುಟಾಣಿ ಬಲೂನ್ ರೆಡಿ.ಘಂಟೆಗಟ್ಟಲೆಆಡಿದ್ರು.ಹಾಗಲ್ಲಾಹೀಗೆ,ಹೀಗಲ್ಲಾಹಾಗೆ ಅಂತಾ ಕಿತ್ತಾಡಿದ್ರು. ಆ ಸಮಯಕ್ಕೂ ಒಂದಕ್ಲಿಕ್ ಮಾಡ್ಕೊಂಡೆ.ಅದೂಕೂಡಾ ಒಂದು ಒಳ್ಳೆಚಿತ್ರ ಆಯ್ತು.

ಓದುವ ನೆಪ

ಆದಿನ ತುಂಬಾಛಳಿ. ಮನೆಯಿಂದಾಚೆ ಬರುವದೆಂದರೆ ನರಕ.ಅಂತಹದರಲ್ಲಿ ನನ್ನ ಅಕ್ಕನ ಮಕ್ಕಳು ಮನೆಯಿಂದಾಚೆಬಂದು ಓದುತ್ತಾ ಕುಳಿತಿದ್ರು . ಅಬ್ಬಾ! ನೋಡಿ ಅವರಿಗೆ ಛಳಿ ಪರಿವೆಯೇಇಲ್ಲ.ಯಾಕಂದ್ರೆ ಅವರು ಎಳೆಬಿಸಿಲು ಬರುವಲ್ಲಿಯೇ ಕೂತಿದಾರೆ.ಕೂತಿರುವದು ಕೂಡಾ ಹಣ್ಣಡಿಕೆಯಮೇಲೆ. ವ್ಹಾ! ಎಂಥಾದೃಶ್ಯ. ಆ ಕೂಡಕೆ ಕ್ಯಾಮೆರಾತಂದು ಒಂದೆರಡು ಫೋಟೊ ತೆಕ್ಕೊಂಡು ನಾನೂ ಅವಿತು ಕುಳಿತೆ.ತಕ್ಷಣ ಹುಡುಗ ಎದ್ದೋಡಿದ.ನೋಡಿದ್ರೆ ಚಿಕ್ಕುಹಣ್ಣು ಬಿದ್ದಿತ್ತು.ಇಬ್ರೂ ಚೂರುಮಾಡಿ ತಿಂದ್ರು. ಮತ್ತೆ ಮುಖಕ್ಕೆ ಪುಸ್ತಕ ಹಿಡಿದು ಹಣ್ಣು ಬೀಳುವದನ್ನೇ ಕಾಯ್ತಾಕೂತ್ರು.


ಚೆನ್ನಾಗಿ ಉಗೀತಿದ್ರು



ಆಗ ವೆನಿಲ್ಲಾಕ್ಕೆ ಭಾರೀ ಬೆಲೆ.ನಾನೂ ಸ್ವಲ್ಪ ಬಳ್ಳಿಹಚ್ಚಿದ್ದೆ.ಬೇಗ ಬೆಳೆ ಬರಲೆಂದು ಗೊಬ್ಬರ ಸ್ಪ್ರೇ ಮಾಡಲು ಸ್ಪ್ರೇಗನ್ ಕೂಡಾ ತಂದೆ.ಕೆಲವುದಿನ ಭಾರೀ ಕೃಷಿ. ಸ್ವಲ್ಪ ದಿನದ ನಂತರ ಬಳ್ಳಿ ಚಿಗುರಿದರೆ ಆಧಾರಕ್ಕಾಗಿನೆಟ್ಟ ಗಿಡ ಸತ್ತಿತ್ತು.ಗಿಡ ಬದುಕಿದ್ದು ಬಳ್ಳಿ ಸತ್ತಿತ್ತು.ಬೀನ್ಸ್ ಡ್ರೈ ಮಾಡಬೇಕೆಂದಿದ್ದೆ ಆದ್ರೆ ಬಳ್ಳಿಯನ್ನೆ ಡ್ರೈ ಮಾಡ್ದೆ.ವೆನಿಲ್ಲಾ ಕತೆ ಮುಗೀತು ಆದ್ರೆ ಸ್ಪ್ರೇಯರನ್ನ ಮಕ್ಕಳು ನೋಡ್ಕೊಂಡಿದ್ರು.ದಿನಾಲು ನೀರಾಟ ಆಡ್ತಿದ್ರು.ಮೈ ಒದ್ದೆಯಾಗ್ತಿತ್ತು ಮನೆಲ್ಲಿ ಚೆನ್ನಾಗಿ ಉಗಿತಿದ್ರು.ನಾ ಒಳ್ಳೊಳ್ಳೆ ಫೋಟೋ ತೆಕ್ಕೊಳ್ತಿದ್ದೆ.

ಬೇಡಾ..ಈ .ಹುಲಿಮುದ್ದು



ಪಕ್ಕದೂರು ಬೆಂಗಳೆ.ಸುಧಾಕರ್ ಹೇಮಾದ್ರಿ ನನ್ನ ಮಿತ್ರ.ಅವನ ಇಬ್ಬರು ಮಕ್ಕಳು ಐಸಿರಿ,ನೇಸರ. ಈ ಪುಟಾಣಿಗಳ ಫೋಟೊ ತೆಗೆದುಕೊಡುವಂತೆ ಹೇಳಿದ್ದ. ಮಕ್ಕಳನ್ನ ಒಳ್ಳೆಯ ಬೆಳುಕು ಬರುವಲ್ಲಿ ನಿಲ್ಲಿಸಿ ಹಲವಾರು ಚಿತ್ರಗಳನ್ನು ವಿವಿಧ ಫೋಸ್ಗಳಲ್ಲಿ ಕ್ಲಿಕ್ಕಿಸಿಯಾಯಿತು. ಎಲ್ಲರೂ ಹೊರಡಬೇಕು ಅನ್ನುವಷ್ಟರಲ್ಲಿ ನೇಸರ ಓಡಿಬಂದವನೇ ಅಕ್ಕ ಐಸಿರಿಯನ್ನು ಗಟ್ಟಿಯಾಗಿಹಿಡಿದು ಮುದ್ದಿನ ಫೋಸ್ ಕೊಟ್ಟ. ತಕ್ಷಣ ಕ್ಲಿಕ್ ಮಾಡಿದೆ. ಅವರಿಬ್ಬರೂ ನಿಂತಿದ್ದು ಹಣ್ಣಡಿಕೆಯಮೇಲೆ. ತಮ್ಮನ ಮುದ್ದಿಗೆ ಅಕ್ಕ ಆಯತಪ್ಪಿ ಬೀಳುವಂತಾದಳು. ಆ ಕ್ಷಣದ ಫೋಟೋ ತೆಗೆಯಲಾಗಲಿಲ್ಲ. ಮಗುವನ್ನ ಹಿಡಿದುಕೊಳ್ಳಲು ನಾನೂ ಮುಂದಾದೆ.

ಗುರುವಾರ, ಆಗಸ್ಟ್ 5, 2010

ಬಾಲ್ಯದ ನೆನಪು


ಬಣ್ಣದ ಗರಿಯಿದು-



ಇಂತಹ ಚಿತ್ರವನ್ನು ತೆಗೆಯುವ ಟೆಕ್ನಿಕ್ ಯಾರಿಂದಲೂ ಸಿಕ್ಕಿಲ್ಲ.ಜರ್ಮನ್ ನ್ಯೂಸ್ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರವೊಂದನ್ನನೋಡಿ,ಸತತ ಪ್ರಯತ್ನದಿಂದ ಕ್ಯಾಮೆರಾದಮೇಲೆ ಹಿಡಿತ ಸಾಧಿಸಿದ ಚಿತ್ರವಿದು.ನಂತರದ ದಿನಗಳಲ್ಲಿ ಏಕಲವ್ಯನ ಮಾರ್ಗ ಅನುಸರಿಸಿ ಛಾಯಾಗ್ರಹಣ ಕಲೆಯನ್ನು ಕರಗತ ಮಾಡಿಕೊಂಡೆ.


ಅಕ್ಕನ ಪ್ರೀತಿ-



ಚಿಕ್ಕವನಿದ್ದಾಗ ಅಕ್ಕಂದಿರಜೊತೆ ಗದ್ದೆಯಲ್ಲಿ ಆಟ ಆಡುತ್ತಿದ್ದೆ.ಸಸಿ ಮಡಿಗಳಲ್ಲಿ ಅಕ್ಕನ ಕೈ ಹಿಡಿದುಕೊಂಡು ಓಡುತ್ತಿದ್ದೆ.ಆ ದಿನಗಳ ನೆನಪೇ ಈ ಚಿತ್ರಕ್ಕೆ ಪ್ರೇರಣೆ. ಕ್ಲಿಕ್ಕಿಸಿದ್ದೇನೋಸರಿ ಹೇಗೆ ಮೂಡಿದೆ ನೋಡುವದು ವಾರದ ನಂತರ.ಏಕಂದ್ರೆ ಆಗ ರೋಲ್ ಯುಗ.


ಇನ್ನೂ ದೂರಕೆ-




ಶಾಲೆಗೆ ರಜಾಇದ್ದಾಗ ಅಡವಯಿಂದ ಬಿದಿರು ಕಡಿದುತಂದು,ನಾವೆ ಪಿಚಕಾರಿ ಮಾಡಿಕೊಂಡು ನೀರಾಟ ಆಡಬೇಕಿತ್ತು.ಆದರೆ ಈಗ ಪೇಟೆಯಿಂದ ತಂದರಾಯಿತು ನೀರಾಟ ಆಡಿದರಾಯಿತು.
ಪಿಚಕಾರಿ ಸುಲಭದಲ್ಲಿ ಸಿಕ್ಕರೂ ಶಟರ್ ಕಡಿಮೆ ವೇಗದಲ್ಲಿಟ್ಟು ಫೋಟೋ ತೆಗೆಯುವದು ಸುಲಭವಲ್ಲ

ಕೈ ಕೈ ಹಿಡಿದು-



ಬೆಸಿಗೆರಜಾ ಪೂರ್ತಿ ಅಜ್ಜನಮನೆಯಲ್ಲಿಯೇ.ಮೊಮ್ಮಕ್ಕಳೆಲ್ಲಾ ಸೇರಿದರೆ ನದಿಯ ತಟದಲ್ಲಿಯೇ ಆಟ.ಇನ್ನೋಂದು ದಂಡೆಗೆ ಹೋಗುವದಾದರೆ ಅಥವಾ ನದಿಮಧ್ಯೆ ಇರುವ ದೊಡ್ಡ ಕಲ್ಲುಬಂಡೆಯಮೇಲೆ ಕೂಡ್ರುವದಾದರೆ ಹೀಗೇ ಕೈಕೈ ಹಿಡಿದು ದಾಟುತ್ತಿದ್ದೆವು.

ಸೈಕಲ್ ಸ್ನಾನ-



ಕೆಸರಾದ ಸೈಕಲ್ ಕಂಡರೆ ತೊಳೆದುಕೊಡುತ್ತೇವೆಂಬ ನೆಪಮಾಡಿ ಸೈಕಲ್ ಪಡೆದು,ತೃಪ್ತಿಯಾಗುವಸ್ಟು ಕೈಕಲ್ ಹೊಡೆಯುತ್ತಿದ್ದೆವು. ಆ ನಂತರ ನೀರಿನಲ್ಲಿ ಸೈಕಲ್ ನಿಲ್ಲಿಸಿ ಜೋರಗಿ ಪ್ಯಾಟಲ್ ತಿರುಗಿಸಿ, ಎತ್ತರಕ್ಕೆ ಚಿಮ್ಮಿದ ನೀರಿನಿಂದ ನಾವೂ ಸ್ನಾನ ಮಡುತ್ತಿದ್ದೆವು.ಮರೆಯಲಾರದ ನೆನಪು ಸ್ಥಿರಚಿತ್ರವಾಗಿ, ಹಲವು ರಾಜ್ಯ,ರಾಷ್ಟ್ರ,ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತಂದುಕೊಟ್ಟಿತು.